ಬುಧವಾರ, ಮೇ 20, 2009

ಸುಕುಮಾರ್ ಸೇನ್ ಜಯ್ ಹೋ !!

ಈಗಷ್ಟೇ ಫಲಿತಾಂಶ ಹೊರಬಿದ್ದಿದೆ. ಯಾವ ಪಕ್ಷಕ್ಕೂ ಬಹುಮತ ನೀಡದೆ, ಹಾಗೆಂದು ಸ್ಥಿರ ಸರ್ಕಾರ ರಚನೆಗೆ ತೊಂದರೆಯೂ ಆಗದಂತೆ ಮತದಾರ ಬುದ್ದಿವಂತಿಕೆಯಿಂದ ಮತ ಚಲಾಯಿಸಿದ್ದಾನೆ. ಪ್ರಜಾಪ್ರಭುತ್ವದ ಗಜಗಮನಕೆ ಚುನಾವಣೆಯೇ ಅಂಕುಶ ಎಂಬುದನ್ನು ಅವನು ಅರ್ಥ ಮಾಡಿಕೊಂಡಿರುವುದಕ್ಕೆ ಸಾಕ್ಷಿ ಇದು. (ಮತ ಹಾಕದವರನ್ನು ಬಿಟ್ಟುಬಿಡಿ, ಅವರು ತೀರಾ "ಬುದ್ಧಿವಂತರು") ಆದರೆ ಭಾರತದ ಮೊದಲ ಚುನಾವಣೆಯ ಸಮಯದಲ್ಲಿ ಹೀಗಿರಲಿಲ್ಲ. ಆಗಷ್ಟೇ ಸ್ವತಂತ್ರ್ಯ ಬಂದಿತ್ತು.21 ವರ್ಷವಾದ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಮತದಾನದ ಹಕ್ಕು ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಯ್ತು (ಆಗಿನ್ನೂ ಅಮೆರಿಕದಂಥ ದೇಶದಲ್ಲೇ ಎಲ್ಲರಿಗೂ ಮತ ನೀಡುವ ಹಕ್ಕು ಕೊಡುವ ಕುರಿತು ಅನುಮಾನಗಳಿದ್ದವು. ಹಲವು ದೇಶಗಳಲ್ಲಿ ಟ್ಯಾಕ್ಸ್ ಕಟ್ಟುವ, ವಿದ್ಯಾವಂತರಿಗೆ ಮಾತ್ರ ಮತ ನೀಡುವ ಹಕ್ಕಿತ್ತು.) ಭಾರತದಲ್ಲಿ ಆಗ 21 ವರ್ಷ ದಾಟಿದವರ ಸಂಖ್ಯೆ ಹದಿನೇಳು ಕೋಟಿ ಅರವತ್ತು ಲಕ್ಷಕ್ಕೂ ಹೆಚ್ಚಿತ್ತು. ಅದರಲ್ಲಿ ಶೇ.85ರಷ್ಟು ಅನಕ್ಷರಸ್ಥರು. ಅವರಿಗೆ ಚುನಾವಣೆಯ ಬಗ್ಗೆ ತಿಳಿ ಹೇಳುವುದಾದರೂ ಹೇಗೆ?

ಇಂಥ ಸಮಸ್ಯೆ ಪರಿಹರಿಸಲು ಶ್ರಮಿಸಿದವ ಸುಕುಮಾರ್ ಸೇನ್ ಎಂಬ ಭಾರತದ ಪ್ರಜಾಪ್ರಭುತ್ವದ ತೆರೆಮರೆಯ ನಾಯಕ, ಆಗಿನ ಮುಖ್ಯ ಚುನಾವಣಾಕಾರಿ. ಬೆಂಗಾಲದ ಸುಕುಮಾರ್ ಸೇನ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಬಂಗಾರದ ಪದಕ ಗಳಿಸಿದ ಪ್ರತಿಭೆ. ಅದುವರೆಗೂ ಪಶ್ಚಿಮ ಬಂಗಾಳದ ಮುಖದಯ ಸೆಕ್ರೆಟರಿಯಾಗಿದ್ದ ಸುಕುಮಾರರ ಹೆಗಲಿಗೆ ಮೊದಲ ಚುನಾವಣೆಯ ಭಾರ ಹೊರಿಸಲಾಯಿತು. ಭಾರತದಲ್ಲಿ ಚುನಾವಣೆ ಎಂದರೆ ಅದು ಪ್ರಜಾಪ್ರಭುತ್ವದ ಪರೀಕ್ಷೆ ಎಂದು ಜಗತ್ತು ಕುತೂಹಲದಿಂದ ನೋಡುತ್ತಿದೆ ಎಂದು ಅರಿತಿದ್ದ ಸುಕುಮಾರ್ ಹೊಸ ಪ್ರಯೊಗಗಳಿಗೆ ಮುಂದಾದರು.

ಮೊದಲು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಬೇಕಿತ್ತು. ಅದಕ್ಕೂ ಸಾಮಾಜಿಕ ಹಾಗೂ ತಾಂತ್ರಿಕ ಸಮಸ್ಯೆಗಳು ಬಹಳಷ್ಟಿದ್ದವು. ಹೆಣ್ಣುಮಕ್ಕಳು ತಮ್ಮ ಹೆಸರನ್ನು ಬರೆಸಲೊಪ್ಪದೆ, ಗಂಡ ಅಥವಾ ಅಪ್ಪನ ಹೆಸರಿಂದ ಗುರುತಿಸಿಕೊಳ್ಳುವುದನ್ನು ಸುಕುಮಾರ್ ವಿರೋಧಿಸಿದರು. ಮಹಿಳೆಯರು ತಮ್ಮ ಸ್ವಂತ ಹೆಸರಿನಲ್ಲಿಯೇ ಮತಪಟ್ಟಿಗೆ ನೊಂದಾಯಿಸಲು ಮನ ಒಲಿಸಬೇಕಾಯಿತು. ಅದಕ್ಕಾಗಿ ಕೆಲವು ಪ್ರಾಮಾಣಿಕ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಯಿತು. (ಸುಕುಮಾರರ ಈ ಎಲ್ಲಾ ಪ್ರಯತ್ನಗಳ ಮಧ್ಯೆಯೂ ಸುಮಾರು ಎರಡು ಲಕ್ಷದ ಎಂಬತ್ತು ಸಾವಿರ ಮಹಿಳೆಯರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಒಪ್ಪದೆ, ಮತದಾನದಿಂದ ವಂಚಿತರಾದರು) ವಿಧಾನ ಸಭಾ, ಲೋಕಸಭಾ ಕ್ಷೇತ್ರಗಳನ್ನು ಅಭ್ಯಸಿಸಿ, ಅವುಗಳ ಭೌಗೋಳಿಕ ನೀಲನಕ್ಷೆ ರಚಿಸುವುದಕ್ಕೇ ಆರು ತಿಂಗಳು ಬೇಕಾಯಿತು. ಮತಪತ್ರ ಹೇಗಿರಬೇಕು, ಪೆಟ್ಟಿಗೆ ಹೇಗಿರಬೇಕು ಎಂಬುದರ ಬಗ್ಗೆ ಪರಿಣತರೊಂದಿಗೆ ಚರ್ಚೆ ನಡೆಸಲಾಯಿತು.

ಮೊದಲ ಚುನಾವಣೆಯಾದರೂ ಕಣದಲ್ಲಿರುವವರ ಸಂಖ್ಯೆ ಕಡಿಮೆಯೇನಿರಲಿಲ್ಲ. ಲೋಕಸಭೆಯ 498 ಸ್ಥಾನಗಳೂ ಸೇರಿದಂತೆ ಲೋಕಸಭೆ ವಿಧಾನ ಸಭೆ ಎರಡರಿಂದ ಒಟ್ಟು ೪೪೧೨ ಸ್ಥಾನಗಳಿದ್ದವು. ಅಭ್ಯರ್ಥಿಗಳ ಸಂಖ್ಯೆ18.000! ಓದು ಬರಹ ಬಾರದವರೇ ಮತದಾರರೇ ಬಹುಸಂಖ್ಯಾತರಿರುವುದರಿಂದ ಅವರಿಗೆ ಪಕ್ಷಗಳನ್ನು, ಅಭ್ಯರ್ಥಿಗಳನ್ನು ಸುಲಭವಾಗಿ ಗುರುತಿಸಲು ಚಿಹ್ನೆಗಳನ್ನು ನೀಡಲಾಯಿತು. ಅವೂ ಸಹ ದಿನಬಳಕೆಯ, ಮತದಾರರಿಗೆ ಪರಿಚಿತವಿರುವ ವಸ್ತುಗಳಾಗಿರಬೇಕು ಎನ್ನುವುದೂ ಚುನಾವಣಾ ಆಯೋಗದ ನಿಯಮವಾಗಿತ್ತು.

ಅಂತೂ ಇಂತೂ 1951-52ಕ್ಕೆ ಚುನಾವಣೆಗೆ ಭಾರತ ತಯಾರಾಯಿತು. ಸುಮಾರು ಎರಡು ಲಕ್ಷದ ಇಪ್ಪತ್ನಾಲ್ಕು ಸಾವಿರ ಮತಗಟ್ಟೆಗಳು, 22 ಲಕ್ಷ ಸ್ಟೀಲ್ ಮತಪೆಟ್ಟಿಗೆಗಳು ಸಿದ್ಧಗೊಂಡವು. ಮತದಾನ ಪ್ರಕ್ರಿಯೆಗೆ ಸಹಾಯ ಮಾಡಲು ಸುಮಾರು ಮೂರೂವರೆ ಲಕ್ಷ ಅಧಿಕಾರಿಗಳು, ಮತಗಟ್ಟೆಗಳ ಬಳಿ ಕಾವಲು ಕಾಯಲು ಎರಡು ಲಕ್ಷದ ಇಪ್ಪತ್ನಾಲ್ಕು ಸಾವಿರ ಪೊಲೀಸ್ ಅಧಿಕಾರಿಗಳು ನಿಯುಕ್ತಗೊಂಡರು. ಮತಗಟ್ಟೆ ನಿರ್ಮಿಸುವುದೇನೂ ಸುಲಭದ ಮಾತಾಗಿರಲಿಲ್ಲ. ಎಷ್ಟೋ ಹಳ್ಳಿಗಳನ್ನು ತಲುಪಲು ರಸ್ತೆಗಳೇ ಇರಲಿಲ್ಲ. ಚುನಾವಣೆಗೆಂದೇ ವಿಶೇಷವಾಗಿ ಎಷ್ಟೋ ನದಿಗಳಿಗೆ ಸೇತುವೆಗಳನ್ನು ಕಟ್ಟಬೇಕಾಯಿತು. ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳಿಗೆ ಮತಪೆಟ್ಟಿಗೆಗಳನ್ನು ಒಯ್ಯಲು ನೌಕಾದಳದ ಹಡಗುಗಳನ್ನು ಬಳಸಿದರು.

ಅನಕ್ಷರಸ್ಥ ಮತದಾರರಿಗೆ ಗೊಂದಲವಾಗದಿರಲು ಸುಕುಮಾರ್ ಅನೇಕ ಉಪಾಯಗಳನ್ನು ಮಾಡಿದರು. ಒಂದು ಮತಗಟ್ಟೆಯಲ್ಲಿ ಒಂದೇ ಮತಪೆಟ್ಟಿಗೆ ಇಡದೆ, ಹಲವು ಮತಪೆಟ್ಟಿಗೆ ಇಡಲಾಯಿತು. ಪ್ರತಿ ಪಕ್ಷಕ್ಕೂ ಅದರ ಚಿಹ್ನೆ ಇರುವ ವಿಶೇಷ ಮತಪೆಟ್ಟಿಗೆ. ಇದರಿಂದ ಮತದಾರ ಮತಗಟ್ಟೆ ಹೊಕ್ಕೊಡನೆ ತಾನು ಬಯಸಿದ ಪಕ್ಷದ ಚಿಹ್ನೆಯನ್ನು ಗುರುತಿಸಿ, ಅದೇ ಪೆಟ್ಟಿಗೆಗೆ ಮತ ಹಾಕಲು ಸುಲಭವಾಗುತ್ತಿತ್ತು. ಅಲ್ಲದೆ ಒಮ್ಮೆ ಮತ ಹಾಕಿದವ ಮತ್ತೊಮ್ಮೆ ಹಾಕುವುದನ್ನು ತಪ್ಪಿಸಲು ಭಾರತೀಯ ವಿಜ್ಞಾನಿಗಳು ತಯಾರಿಸಿದ ವಿಶೇಷ ಶಾಹಿಯನ್ನು ಬಳಸಲಾಯಿತು.
ಈ ಎಲ್ಲ ಯೋಜನೆ, ಪರಿಶ್ರಮಗಳ ಹಿನ್ನೆಲೆಯಲ್ಲಿ 1952ರ ಚುನಾವಣೆ ಭರ್ಜರಿ ಯಶಸ್ಸು ಕಂಡಿತು. ಶೇ 62ರಷ್ಟು ಜನರು ಅಂದರೆ ಸುಮಾರು 17.6 ಕೋಟಿ ಮತದಾರರಲ್ಲಿ 11ಕೋಟಿ ಜನರು ಮತ ಚಲಾಯಿಸಿದರು. ಸ್ವತಂತ್ರ್ಯ ಬಂದು ಆರು ದಶಕ ನಂತರದ ಈ ಬಾರಿಯ ಮತದಾನದ ಶೇಕಡಾವಾರು ನೋಡಿದರೆ ಸುಕುಮಾರಸೇನರ ಪರಿಶ್ರಮ ಅರ್ಥವಾಗುತ್ತದೆ.

ಸುಕುಮಾರರ ಪ್ರಾಮಾಣಿಕತೆಗೆ, ದೂರದೃಷ್ಟಿಗೆ ಸಾಟಿಯೇ ಇಲ್ಲ.1957ರಲ್ಲಿ ನಡೆದ ಎರಡನೇ ಮಹಾ ಚುನಾವಣೆಗೂ ಸುಕುಮಾರಸೇನರೇ ಮುಖ್ಯ ಚುನಾವಣಾಧಿಕಾರಿಯಾಗಿದ್ದರು. ಸ್ವಾರಸ್ಯವೆಂದರೆ ಮೊದಲ ಚುನಾವಣೆಗಿಂತ ಎರಡನೇ ಚುನಾವಣೆಗೆ ನಾಲ್ಕು ಕೋಟಿ ಐವತ್ತು ಲಕ್ಷ ಕಡಿಮೆ ಖರ್ಚಾಯಿತು. ಏಕೆಂದರೆ ಮೊದಲ ಚುನಾವಣೆಗೆ ತಯಾರಿಸಿದ್ದ ಸುಮಾರು ಮೂವತ್ತೈದು ಲಕ್ಷ ಮತಪೆಟ್ಟಿಗೆಗಳನ್ನು ಸುಕುಮಾರ್ ಜತನವಾಗಿರಿಸಿದ್ದರು ! ಒಟ್ಟಿನಲ್ಲಿ ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಸದೃಢವಾಗಿ ಬೇರೂರಿ, ಸಶಕ್ತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗೆಲ್ಲಲು ಸುಕುಮಾರಸೇನರ ಕಾಣಿಕೆ ಮರೆಯುವಂತಿಲ್ಲ. ಜಯ್ ಹೋ ಹೇಳಬೇಕಾಗಿರುವುದು ತೆರೆಮರೆಯ ಇಂಥ ಹೀರೋಗಳಿಗೆ.

10 ಕಾಮೆಂಟ್‌ಗಳು:

  1. ರಜನಿ,
    ತುಂಬ ಒಳ್ಳೆ ಉಪಯುಕ್ತ ವಾದ ಮಾಹಿತಿ,,,,ಚುನಾವಣ ಅದಿಕಾರಿಗಳ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿತ್ತು,, ಆದರೆ ಇದರ ಹಿಂದೆ ಇಸ್ಟೊಂದು ಪರಿಶ್ರಮ ಇದೆ ಅಂತ ಗೊತಿರಲಿಲ್ಲ , ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಸಿದಕ್ಕೆ ಧನ್ಯವಾದಗಳು...
    ಸುಕುಮಾರರ ಬಗ್ಗೆ ಅವರ ಪೂರ್ವ ಯೋಜಿತ ಕೆಲಸಗಳ ಬಗ್ಗೆ.... ಒಳ್ಳೆ ಮಾಹಿತಿ ನೀಡುರುವಿರಿ...
    ಧನ್ಯವಾದಗಳು

    ಗುರು

    ಪ್ರತ್ಯುತ್ತರಅಳಿಸಿ
  2. ಪರಾಂಜಪೆಯವರೆ....

    ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ...
    ಉಪಯುಕ್ತ ಮಾಹಿತಿಗಾಗಿ ವಂದನೆಗಳು..

    ಪ್ರತ್ಯುತ್ತರಅಳಿಸಿ
  3. ರಜನಿ ಮೇಡಮ್,

    ಒಳ್ಳೆಯ ಮತ್ತು ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ..ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ರಜನಿಯವರೆ.....

    ನಿಜ ಹೆಸರು ನೋಡಿ ಪರಾಂಜಪೆಯವರದು ಅಂದುಕೊಂಡೆ..
    ಇಬ್ಬರದೂ ಒಂದೆ ಹೆಸರಿದೆಯೆಂದು ಗೊತ್ತಾಗಲಿಲ್ಲ....

    ಕ್ಷಮೆ ಇರಲಿ...

    ಸುಕುಮಾರನ್ ಬಗೆಗೆ ನಿಮ್ಮ ಮಾಹಿತಿ ಚೆನ್ನಾಗಿದೆ..
    ನನಗಂತೂ ಗೊತ್ತಿರಲಿಲ್ಲ....

    ನನ್ನ ಬ್ಲಾಗಿಗೆ ಬಂದು ಸುಮ್ಮನೇ ಹೋಗಿಬಿಟ್ಟಿದ್ದೀರಿಲ್ಲ...

    ಚಿತ್ರ ಲೇಖನ ಓದಿದ್ದೀರಾ...?
    ದಯವಿಟ್ಟು ಓದಿ....

    ಪ್ರತ್ಯುತ್ತರಅಳಿಸಿ
  5. sukunmar sainge aste alla nimagoo jay helabeku,yakendare inthaha vishista mahitiyannu odugarige nididdiri, dhanyavada...

    ಪ್ರತ್ಯುತ್ತರಅಳಿಸಿ
  6. ಜೈ ಹೋ ! ತುಂಬಾ ಚೆನ್ನಾಗಿ ಬರೆದಿದ್ದೀರಿ ಧನ್ಯವಾದಗಳು .,
    ನನಗೆ ತುಂಬಾ ಸಂತೋಷವಾಯ್ತು ಕಾರಣ ನೀವು ಸಹ ಶಿವಮೊಗ್ಗದವರು ಎಂದು ತಿಳಿದು, ಹೀಗೆ ಬರಯುತ್ತಿರಿ ಸೃಷ್ಟಿ ಕರ್ತನು ನಿಮಗೆ ಒಳ್ಳೆಯದು ಮಾಡಲಿ.

    ಪ್ರತ್ಯುತ್ತರಅಳಿಸಿ
  7. ಸುಕುಮಾರ ಸೇನ ಬಗ್ಗೆ ಗೊತ್ತೇ ಇರಲಿಲ್ಲ, ಒಳ್ಳೆ ವಿವರ... ದುರಾದೃಷ್ಟ ಅಂದ್ರೆ ಈಗ ಇಷ್ಟೆಲ್ಲ ಸವಲತ್ತು ಇದ್ರೂ ನಾವು ಮತ ಹಾಕಲ್ಲ, ಯಾಕೇಂದ್ರೆ ಮತ ಹಾಕಲಿಕ್ಕೆ ಯಾರು ಲಾಯಕ್ಕು ಅನಿಸಲ್ಲ..

    ಪ್ರತ್ಯುತ್ತರಅಳಿಸಿ
  8. The Casino at The Casino at The Casino at The - Mapyro
    Information and Reviews about The Casino at The 논산 출장샵 Casino at 군포 출장샵 The Casino at The 의왕 출장샵 Casino at The Casino at The Casino at The Casino at The 전라북도 출장샵 Casino at The Casino at 오산 출장마사지 The  Rating: 5 · ‎6 reviews

    ಪ್ರತ್ಯುತ್ತರಅಳಿಸಿ