
ನಾವು ಹುಡುಗಿಯರೇ ಹೀಗೆ: ನಮ್ಮ ವರ್ತನೆಯಲ್ಲಿ ಯಾವುದೂ ನೇರವಲ್ಲ. ನೇರವಾಗಿರುವುದು ನಮ್ಮ ಲಕ್ಷಣವಲ್ಲ. ಮಾತನಾಡುತ್ತೇವಾದರೂ ಹೇಳಬೇಕಾದದ್ದನ್ನು ಹೇಳುವುದಿಲ್ಲ, ಮತ್ತು ಅದನ್ನು ಹೇಳಲೂಬಾರದು ಎಂದುಕೊಂಡಿರುತ್ತೇವೆ. ಈ ಎದೆಯಾಳದ ವಿಚಿತ್ರ ಭಾವವನ್ನೇ ಕೇಳುವವರು ಅರ್ಥಮಾಡಿಕೊಳ್ಳಲಿ ಎಂಬ ಆಸೆ ನಮ್ಮದು. ಅರ್ಥವಾದಾಗ ಅವರ ಕಣ್ಣು ಮಿನುಗುತ್ತಲ್ಲ, ವಿಜಯದ ಭಾವದಿ ಬೀಗುತ್ತಲ್ಲ, ಅದನ್ನ ಕಾಣುವಾಸೆ ನಮ್ಮದು. ಅವರು ಹೀಗೆ ಗೆಲ್ಲಲಿಕ್ಕಾಗಿಯೇ ಆಟವನ್ನು ಹೂಡಿ, ಅದರಲ್ಲಿ ಗೆಲುವನ್ನು ಅವರ ಪಾಲಿಗೆ ಎತ್ತಿಟ್ಟು, ಅವರು ಮೀಸೆ ತಿರುಗಿಸುವಾಗ ಕದ್ದುನೋಡಿ ಸಂಭ್ರಮಿಸಿ "ಗೆದ್ದಿದ್ದು ನಿನ್ನಿಂದಾಗಿಯೇ ಹುಡುಗಿ'ಎನ್ನಲಿ ಎಂದು ಕಾದು ಕೂರುವವರು ನಾವು.
ನಾವು ಹುಡುಗಿಯರೇ ಹೀಗೆ: ಸದಾ ಯಾರನ್ನೋ ಹುಡುಕುತ್ತಿರುತ್ತೇವೆ, ಅವರಿಲ್ಲದ ಊರಲ್ಲೂ. ಆದರೆ ಅವರೇ ಎದುರಿಗೆ ಬಂದಾಗ ತಲೆ ತಗ್ಗಿಸಿಬಿಡುತ್ತೇವೆ, ನೋಡುವ ಬಯಕೆ ಬೆಟ್ಟದಷ್ಟಿದ್ದರೂ. ಬಣ್ಣ ಬಣ್ಣದ ಕನಸು ಕಟ್ಟುತ್ತೇವೆ. ಹಗಲೂರಾತ್ರಿ ಅದನ್ನೇ ನೆನೆದು ಸಂಭ್ರಮಿಸುತ್ತೇವೆ. ಆದರೆ ಅದನ್ನು ಸಾಧಿಸಿಕೊಳ್ಳುವುದಕ್ಕಿಂತ ಇನ್ನೊಬ್ಬರ ಕನಸನ್ನು ನನಸು ಮಾಡುವುದೇ ಕರ್ತವ್ಯ ವೆಂದುಕೊಂಡುಬಿಡುತ್ತೇವೆ. . ಅರ್ಧವಾಗೇ ಉಳಿದ ಕನಸನ್ನೂ ಹೊರಚೆಲ್ಲದೆ ಕಣ್ಣಲ್ಲಿ ಹಾಗೇ ಬಚ್ಚಿಟ್ಟುಕೊಂಡುಬಿಡುತ್ತೇವೆ, ನಿದ್ದೆಗೂ ಅಲ್ಲಿ ಜಾಗವಿಲ್ಲದಂತೆ...
ನಾವು ಹುಡುಗಿಯರೇ ಹೀಗೆ: ಹೂವು, ಚಿಟ್ಟೆ, ಚುಕ್ಕಿ, ಚಂದ್ರಮ, ಬೆಳ್ಳಿ, ಬಂಗಾರ ಏನನ್ನು ಕಂಡರೂ ನಮಗೆ ಆಸೆ, ಪ್ರೀತಿ. ನಾವೇ ನೆಟ್ಟ ಗುಲಾಬಿ ಗಿಡದಲ್ಲಿ ಮೊಗ್ಗು ಹೂವಾಗುತ್ತಿದೆಯೆಂದು ರಾತ್ರಿಯಿಡೀ ಕಾದು ಕುಳಿತು ನೋಡುವವರು ನಾವು. ಅಂಗೈಯಲ್ಲಿ ಮುಚ್ಚಿಟ್ಟ ದೀಪದಂತೆ ನೋಡಿಕೊಳ್ಳುವವರಿದ್ದರೂ ಸುರಿವ ಮಳೆಯಲ್ಲಿ ಇನ್ಯಾರನ್ನೋ ಹುಡುಕಿಕೊಂಡು ಹೊರಟುಬಿಡಬಲ್ಲೆವು. ಗಣಿತದಲ್ಲಿ ನೂರು ಅಂಕಗಳಿಸಿದ್ದರೂ ಬದುಕಿನ ಗಳಿಕೆಯ ಏಣಿಸಲೂ ಹೋಗದ, "ಇಷ್ಟಾದರೂ ಕೊಟ್ಟರಲ್ಲ' ಎಂಬ ತೃಪ್ತಿಗೆ ಎಷ್ಟಾದರೂ ಎತ್ತಿ ನೀಡುವವರು ನಾವು. ಬಸ್ನಲ್ಲಿ ಕುಳಿತಿರುವಾಗ ಯಾರದ್ದೋ ಮಗುವನ್ನು ಕರೆದು ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುವಂತೆ ಯಾರದ್ದೋ ಸೋಲನ್ನೂ ಮಗುವಂತೆ ಎತ್ತಿ ಮುದ್ದಿಸಿ ನಗಿಸಿ, ಕೈಬೀಸಿ ಕಳಿಸಿಕೊಡಬಲ್ಲೆವು.
ನಾವು ಹುಡುಗಿಯರೇ ಹೀಗೆ: ಸ್ವಾತಂತ್ರ್ಯಕ್ಕಾಗಿ ಬಡಿದಾಡಿ, ಬಂಡೆದ್ದು ಮನೆ ಬಿಟ್ಟು ನಡೆದುಬಿಡುತ್ತೇವೆ, ಇನ್ಯಾರದೋ ತೋಳಬಂಧನಕ್ಕೆ. ನಾಚಿಕೆಯ ಮುಳ್ಳಂತೆ ನಾಚಿ ರೆಪ್ಪೆ ಮುಚ್ಚುವ ನಾವು ಒಮ್ಮೊಮ್ಮೆ ಸಿಡಿದೆದ್ದು ಮುಳ್ಳು ಚುಚ್ಚುವುದೂ ಉಂಟು. ಸ್ವಾಭಿಮಾನದ ಕೆಚ್ಚು ಮನದಲ್ಲಿದ್ದರೂ ಸಮರ್ಪಣೆಯ ಸುಖವೂ ಗೊತ್ತು. ಇನ್ನೂ ಪುಟ್ಟ ಮಗು ಎಂದು ನೀವು ಮುದ್ದಿಸುತ್ತಿರುವಾಗಲೇ "ನನಗೊಂದು ಮಗು ಬೇಕು’ ಎಂದು ಕೇಳಿದರೆ ಬೆಚ್ಚಿ ಬೀಳದಿರಿ. ನಾವು ಹುಡುಗಿಯರೇ ಹೀಗೆ...
tumba chennagide, hudugiyara manassige hidida kaigannadi, esta aaitu, intha lekhanagalu ennoo hechchagi modi barali
ಪ್ರತ್ಯುತ್ತರಅಳಿಸಿIts mice but bit complicate to understand please explain with more examples so that even tenagers can understand and adopt those things in their life. Gud Luck.
ಪ್ರತ್ಯುತ್ತರಅಳಿಸಿIts nice but bit complicated to understand please explain with more examples so that even tenagers can understand and adopt those things in their life. Gud Luck.
ಪ್ರತ್ಯುತ್ತರಅಳಿಸಿpainting nodi nange enoo annislilla . kate odida haage enenoo ansthu
ಪ್ರತ್ಯುತ್ತರಅಳಿಸಿmatte navu hudguru hege antha neen andkodiddhi?adnu bardre chennagiruthhe
ಪ್ರತ್ಯುತ್ತರಅಳಿಸಿThe best part about this post is the picture projects eegina hudugiru tumba modern agiddare. Adre yene agali namma thinking namma action is word to word very true as written by you.Tumba simple sentence nalli deep vicharagalannu tilisiddiya..Naanu tumba enjoy maadide reading this. Dhanyavadagalu madam :)
ಪ್ರತ್ಯುತ್ತರಅಳಿಸಿIde reeti manassige muttuva,namma thought process na strong maado blogs bari..ide nanna aashyaa... Because ನಾವು ಹುಡುಗಿಯರೇ ಹೀಗೆ :)
right,we girls are just the same as you write
ಪ್ರತ್ಯುತ್ತರಅಳಿಸಿSuperb Article! Exactly you have written what we are!.
ಪ್ರತ್ಯುತ್ತರಅಳಿಸಿ