
"ಬೆಡ್‌ಲೈಟೇ ಇಲ್ಲದಿದ್ದರೆ ಕನಸು ಕಾಣಿಸೋದೇ ಇಲ್ಲ, ಅಲ್ವಾ ಅತ್ತೆ?" ಐದು ವರ್ಷದ ಸೊಸೆಯ ಮುದ್ದು ಪ್ರಶ್ನೆ. ಹೊಸದಾಗಿ ತಂದಿದ್ದ ಬೆಡ್‌ಲೈಟಿನ ಬಣ್ಣಬಣ್ಣದ ಬೆಳಕ ನೋಡುತ್ತಾ ಅದರಲ್ಲಿ ಚಲಿಸುವ ಥರಾವರಿ ಮೀನಿನ ಚಿತ್ರಗಳನ್ನ ನೋಡುತ್ತಾ ಕೂತವಳ ಕಣ್ಣಲ್ಲಿಯೂ ಬೆರಗಿನ ಬಣ್ಣ. ಪ್ರಕಾಶಮಾನವಾದ ರೂಮಿನ ಟ್ಯೂಬ್‌ಲೈಟ್ ಆರಿದ ನಂತರ ಹತ್ತುವ ಬೆಡ್‌ಲೈಟ್ ಸೃಷ್ಟಿಸುವ ಆಪ್ಯಾಯಮಾನವಾದ ನಸುಕೆಂಪು ಬೆಳಕು ಅವಳಿಗಿಷ್ಟ. ಪ್ರತಿ ದಿನದಂತೆ ನಾನು ರಾಜಕುಮಾರಿಯನ್ನು ಹುಡುಕುತ್ತಾ ಕುದುರೆಯೇರಿ ಬರುವ ರಾಜಕುಮಾರನ ಕತೆ ನೆನಪಿಸಿಕೊಂಡು ಹೇಳುತ್ತಿದ್ದಂತೆ ಅವಳು ನಿದ್ದೆಗೆ ಜಾರಿದರೂ ಗುಲಾಬಿ ಎಸಳಿನಂಥ ತುಟಿಗಳ ಮೇಲೆ ಆ ಬಣ್ಣದ ದೀಪ ಚುಂಬಿಸಿ ಮತ್ತಷ್ಟು ಕೆಂಪಾಗಿತ್ತು...
ನನಗೆ ಗೊತ್ತಿಲ್ಲವೇ, ಈ ಬಣ್ಣದ ದೀಪ ಹೊತ್ತು ತರುವ ಜಾದೂ ಜಗತ್ತು? ಚಿಕ್ಕವಳಿದ್ದಾಗ ನಮ್ಮ ಊರಿನಲ್ಲಿ ಸುಗ್ಗಿಕಾಲದಲ್ಲಿ ಪೇರಿಸಿಟ್ಟ ಬಣವೆ ಕಾಯಲು ಅಪ್ಪ ಹೋಗುತ್ತಿದ್ದ. ಅಪ್ಪನೊಂದಿಗೆ ಮಕ್ಕಳ ದಂಡೂ ಹೋಗುತ್ತಿತ್ತು. ಆ ಕತ್ತಲಲ್ಲಿ ಗದ್ದೆಯ ಬಯಲಿನಲ್ಲಿ ಇರುತ್ತಿದ್ದ ಬೆಳಕು ಬರೀ ಚಂದ್ರ, ನಕ್ಷತ್ರಗಳದ್ದು ಮಾತ್ರವಾಗಿರಲಿಲ್ಲ, ಜತೆಗೆ ಮಿಂಚು ಹುಳಗಳದ್ದೂ ! ಹಾರುವ ಅವುಗಳನ್ನು ಹಿಡಿಯಲು ನಾವೂ ಹಾರಾಡುತ್ತಾ ಏನೆಲ್ಲಾ ಸರ್ಕಸ್ ಮಾಡಬೇಕಾಗುತ್ತಿತ್ತು... ಅದು ನಮ್ಮ ಕೈಗೆ ಸಿಕ್ಕಿಬಿಟ್ಟರೆ ಜಗತ್ತೇ ನಮ್ಮ ಕೈಗೆ ಸಿಕ್ಕಹಾಗೆ ಬೀಗುತ್ತಿದ್ದೆವು. ಅಲ್ಲಿರುತ್ತಿದ್ದ ಎರಡು ಮೂರು ಗಂಟೆಯಲ್ಲಿ ಹತ್ತಿಪ್ಪತ್ತು ಹುಳಗಳನ್ನಾದರೂ ಹಿಡಿದು ಅವನ್ನು ಖಾಲಿ ಬೆಂಕಿಪೆಟ್ಟಿಗೆಯಲ್ಲಿಟ್ಟು ಜೋಪಾನವಾಗಿ ಮನೆಗೆ ತಂದು ಯಾರಿಗೂ ಕಾಣದ ಹಾಗೆ ಮುಚ್ಚಿಡುತ್ತಿದ್ದೆವು.
ರಾತ್ರಿ ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಂಡ ನಂತರ ಅದರೊಳಗೆ ಮಿಂಚು ಹುಳಗಳನ್ನು ಬಿಟ್ಟುಬಿಟ್ಟರೆ... ನಮ್ಮ ಹಾಸಿಗೆಯಲ್ಲಿಯೇ ಮಿನುಮಿನುಮಿನುಗುವ ನಕ್ಷತ್ರಲೋಕ. ಕರೆಂಟೇ ಇಲ್ಲದ ನಮ್ಮ ಮನೆಯಲ್ಲಿ ಸೊಳ್ಳೆ ಪರದೆಯೊಳಗೇ ಸುತ್ತಾಡುತ್ತಿರುವ ಈ ನಕ್ಷತ್ರಗಳು ಬೀರುವ ಹಸಿರು ಮಿಶ್ರಿತ ಹಳದಿ ಬಣ್ಣದ ಬೆಳಕಲ್ಲಿ ಮಲಗಿದರೆ... ಕಾಣುವ ಪ್ರತಿ ಕನಸಿಗೂ ಅಧ್ಭುತ ಲೈಟಿಂಗ್ ಎಫೆಕ್ಟ್! ಜತೆಗೆ ದೂರದಲ್ಲೆಲ್ಲೋ ರಾಜಕುಮಾರನ ಕುದುರೆಯ ಖುರಪುಟದ ಸದ್ದು ಕೇಳಿದಂತಾಗುತ್ತಿದ್ದರೆ ಕಂಬಳಿಯೊಳಗಿದ್ದೇ ನಾವೆಲ್ಲ ಪ್ರಾರ್ಥಿಸುತ್ತಿದ್ದೆವು: "ದೇವರೇ, ಬಣ್ಣಗಳೆಲ್ಲಾ ಬಿಳಿಯಾಗದಿರಲಿ... ಬೇಗನೆ ಬೆಳಕಾಗದಿರಲಿ...!’
ಚಿತ್ರ ಕೃಪೆ: ಈಸಿಡ್ರೀಂಅನಲಿಸಿಸ್.ಕಾಂ
ಮೇಡಂ, ಲೇಖನ ಚೆನ್ನಾಗಿದೆ. ಬಾಲ್ಯದಲ್ಲಿ ಇಂತಹ ಕಲ್ಪನೆಗಳನೆಲ್ಲರೂ ಮಾಡಿರುತ್ತಾರೆ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿರಜನಿ ಮೇಡಮ್,
ಪ್ರತ್ಯುತ್ತರಅಳಿಸಿವಾಹ್! ಎಂಥಹ ಸೊಗಸಾದ ಬರಹ...ಇದು ಕಲ್ಪನೆಯೋ ಅಥವ ಬಾಲ್ಯದ ಅನುಭವವೋ...ಗೊತ್ತಿಲ್ಲ ಅದರೆ ಅದರ ಪ್ರತಿಯೊಂದು ಚಿತ್ರಗಳು ಕಣ್ಣಮುಂದೆ ಸರಿದವು. ಸೊಳ್ಳೆ ಪರದೆಯೊಳಗೆ ಮಿಂಚು ಹುಳುಗಳ ಮೆರವಣಿಗೆ..
ನಾನು ಇಂದು ರಾತ್ರಿ ಇಂಥ ಕನಸನ್ನು ಕಾಣುವ ಆಸೆಯಾಗುತ್ತಿದೆ ನನಗೆ...
ಧನ್ಯವಾದಗಳು.
ಏನ್ರೀ..ರಜನಿಯವರೇ...ನಮ್ಮ ಹೊಟ್ಟೆಮೇಲೂ ಹೊಡೀತಿದೀರಿ ಮತ್ತೆ ನೈಜತೆಯ ನಿಜಪರಿಣಾಮದಿಂದಲೂ ವಂಚಿತರಾಗುತ್ತಿದ್ದೀರಿ
ಪ್ರತ್ಯುತ್ತರಅಳಿಸಿತಮಾಷೆಗೆ ಹೇಳ್ದೆ...ನಾನು ಮತ್ಸ್ಯಶಾಸ್ತ್ರ ಸ್ನಾತಕೋತ್ತರ ಪದವೀಧರ ಅದ್ಕ್ಕೆ ಹೇಳ್ದೆ...
ಅಂದ ಹಾಗೆ ಅಕ್ವೇರಿಯಮ್ ಚಿಕ್ಕದೊಂದು ಆದರೂ ಸರಿ ಇಟ್ಟುಕೊಳ್ಳಿ ಸಂಶೋಧನೆಗಳೇ ತೋರ್ಸಿವೆ ರೀ ಇದು ಮನಸ್ಸಿನ ದುಗುಡಗಳಿಗೆ ತುಮುಲಗಳಿಗೆ ಅತ್ಯುತ್ತಮ ನಿವಾರಣೆ ಎಂದು.
ಚನ್ನಾಗಿದೆ ನಿಮ್ಮ ಪೋಸ್ಟ್ short ಮತ್ತು Sweetಉ. ನಮ್ಮ ಗೂಡಿಗೂ ಬನ್ನಿ.
ಬಣ್ಣದ ಕನಸುಗಳೇ ಸೊಗಸಾದ ಕಲ್ಪನೆ. ಎಂಥ ಚಂದದ ಆಲೋಚನೆ ಕಲ್ಪನೆ ನಿಮ್ಮದು. ಓದಿದ ನಂತರ ನಮ್ಮದೂ ಆಗಿದೆ. ಥ್ಯಾಂಕ್ಸ್.
ಪ್ರತ್ಯುತ್ತರಅಳಿಸಿrajani wonderful writeup goodone firsttime visited your blog.. its good.
ಪ್ರತ್ಯುತ್ತರಅಳಿಸಿlekhan haage kanlpan lokakke karedoyuvantittu...nimma koneya saalugalu tumba ishtavadavu ..
ಪ್ರತ್ಯುತ್ತರಅಳಿಸಿಮೇಡಂ,
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗಿನಲ್ಲಿಯ ಬಣ್ಣ ಬಿಳಿಯಾಗಿರದಿರಲಿ...ಲೇಖನ ತುಂಭಾ ಚೆನ್ನಾಗಿದೆ
ಬಿಡಿವಿದ್ದಾಗ ನಿಮ್ಮ ಎಲ್ಲಾ ಲೇಖನ ಓದುವೆ
ನಿಮ್ಮಗೆ ಕವಿತೆ ಮೇಲೆ ಪ್ರೀತಿ ಇದ್ದರೆ ನನ್ನ ಕನಸಿಗೆ ಬನ್ನಿ.!!